登入選單
返回Google圖書搜尋
Ooru Bhanga
註釋

ವಿವೇಕ ಶಾನಭಾಗ ಅವರ ಊರು ಭಂಗ ಕಾದಂಬರಿಯಿಂದ ಆಯ್ದ ಕೆಲವು ಸಾಲುಗಳು:

'ಅವಳಬೆನ್ನನ್ನು ಸವರಲೆಂದು ಎತ್ತಿದ ಕೈಯನ್ನು ಹಾಗೆ ಅಲ್ಲಿಯೇ ಇರಗೊಟ್ಟರು. ತಾನು ಅವಳ ಜೊತೆಗಿದ್ದೇನೆನ್ನುವುದು ಹೇಳದೆಯೂ ಅವಳಿಗೆ ತಿಳಿಯಲಿ ದೇವರೇ ಎಂದು ಒಳಗೇ ಬೇಡಿಕೊಂಡರು. ಒಂದು ದಾಂಪತ್ಯದಲ್ಲಿ ಬಾಯಿಬಿಟ್ಟು ಹೇಳದೆಯೂ ಪರಸ್ಪರ ಜೀವಕ್ಕೆ ಅರಿವಾಗುವ ಎಷ್ಟೊಂದು ಸಂಗತಿಗಳಿರುತ್ತಾವಲ್ಲ ಎಂದು ಅವರಿಗೆ ಆಗ ಮೊದಲ ಬಾರಿಗೆ ಹೊಳೆಯಿತು.'

'ಹೆಜ್ಜೆಹೆಜ್ಜೆಗೂ ಇರುವ ಅಸಂಖ್ಯ ಆಯ್ಕೆಗಳಲ್ಲಿ ಯಾವುದನ್ನು ಆರಿಸಿದೆವೆಂದು ಯಾವುದನ್ನು ಬಿಟ್ಟೆವೆಂದು ಕಾಲಾಂತರದಲ್ಲಿ ನಿಂತು ನೋಡುವಾಗ ನಮಗೆ ಸರಿಯಾಗಿ ಗೊತ್ತಾಗುತ್ತದೆಯೇ? ಆ ಇನ್ನೊಂದು ಹಾದಿ ಆರಿಸಿಕೊಂಡಿದ್ದರೆ ಏನೇನೋ ಆಗುತ್ತಿತ್ತಲ್ಲ ಎಂದು ಎಷ್ಟು ಸುಲಭವಾಗಿ ಯೋಚಿಸಲು ತೊಡಗುತ್ತೇವೆ. ನಿಜದಲ್ಲಿ ಆ ಆಯ್ಕೆ ಇತ್ತೇ ಎಂಬುದೇ ಅನುಮಾನ.'


A Kannada book by Akshara Prakashana / ಅಕ್ಷರ ಪ್ರಕಾಶನ